ಭಾವನೆಯ ಬೀಜ ಬಿತ್ತಿ
ಅದಕ್ಕೆ ನಗುವೆಂಬ ಮೋಡದಿಂದ
ಮುತ್ತೆಂಬ ನಿರುಣಿಸಿ
ಅ ಗಿಡದಿಂದ ಹೂ ಅರಳುವ ಮುನವೇ
ಅದನ್ನ ಚಿವುಟಿದೆ ಅಲ್ಲ
ಇದು ಸರಿಯೇ?????

ಭಾವನೆಯ ಬೀಜ ಬಿತ್ತಿ
ಅದಕ್ಕೆ ನಗುವೆಂಬ ಮೋಡದಿಂದ
ಮುತ್ತೆಂಬ ನಿರುಣಿಸಿ
ಅ ಗಿಡದಿಂದ ಹೂ ಅರಳುವ ಮುನವೇ
ಅದನ್ನ ಚಿವುಟಿದೆ ಅಲ್ಲ
ಇದು ಸರಿಯೇ?????

ಬರೆಯಬೇಕೆಂದು ಬರೆಯಲಿಲ್ಲ
ಇರಬಹುದು ಹಲವು ದೋಷ
ಸರಿಯಿರುವ ವಾಕ್ಯ ಉಳಿಸಿಕೊಳ್ಳಿ
ಬರಿದಲ್ಲಾ ನನ್ನೊಳಗಿನ ಕಾವ್ಯ……
ಪ್ರೀತಿ ಯಾರನ್ನು ನಿನ್ಯಾರೆಂದು ಕೇಳೋದಿಲ್ಲಾ,
ಅದು ನೀನು ನನ್ನವಳು ಎನುತ್ತದೆ.
ಪ್ರೀತಿ ಎಲ್ಲಿದಿಯಾ ಎಂದು ಕೇಳೋದಿಲ್ಲಾ,
ನನ್ನ ಹೃದಯದಲ್ಲಿರು ಎನುತ್ತದೆ.
ಪ್ರೀತಿ ನನ್ನನು ಪ್ರೀತಿಸು ಅಂತೇನು ಕೇಳೋದಿಲ್ಲಾ,
ಬದಲಿಗೆ ಪ್ರೀತಿಸುತ್ತದೆ ……….
ಚಿಗುರ ಚಿವುಟಿತೋಂದು ಬೇರು
ಧರೆಯ ಬರದಿಗಂಜಿ
ಒಡಲ ಪ್ರೀತಿ ಕಡಲು ಸುಡಲು
ಬೇಯುಥಿಹುದು ಇಂದು
ಬಿಸಿಲ ಬೇಗೆ ನಿರಂತರವೇ?
ವರ್ಷಧಾರೆ ತಣಿಸದೆ?
ನೋವು-ನಲಿವು ಸೋಲು-ಗೆಲಿವು
ಬಾಳ ಭಾವಗೀತೆಯು
ನಮ್ಮಿಬ್ಬರ್ ಈ ಪ್ರೇಮ ಬಯಲಾದ ಬಗೆ ಹೇಗೆ?
ಇದ್ದರು ನಾವು ಪರಿಚಯವಿಲ್ಲದವರ ಹಾಗೆ!
ನಿನ್ಹೆಸರನು ನಲ್ಲೆ, ಕೇಳಿದಾಗಲೆಲ್ಲ,
ಕೆನ್ನೆಗೆ ಕೆಂಪೆಳಿಯುವುದಂತೆ ಹೇಳುವರು ಎಲ್ಲ
ನೀ, ಸುಳಿದಾಡುತಿರೆ ಇಲ್ಲೆಲ್ಲ ನಲ್ಲೆ,
ಕಣ್ಣಲ್ಲಿ ಮಿಂಚಂತೆ ಹೇಳುವರು ಎಲ್ಲ,
ನಾನಂತೂ ಬಾಯ್ಬಿಟ್ಟು ಯಾರಿಗೂ ಹೇಳಿಲ್ಲ,
ಹೀಗಿದರೂ ನಮ್ಮ ಪ್ರೇಮ ಬಯಲಾಗಿದೆಯಲ್ಲ!
ನೋಡಿದರೂ ನೋಡದಂತೆ ನಾವಿದೆವೆಲ್ಲ,
ಸನ್ನೆಯಲಿ ಕೇಳಿದ ನಿನ್ನ ಪ್ರಶ್ನೆಗಳಿಗೆಲ್ಲ,
ಸನ್ನೆಯಲೇ ಉತ್ತರವ ನಾ ಕೊಟ್ಟೆನಲ್ಲ,
ಆದರೂ ಎ ಪ್ರೇಮ ಬಯಲಾಗಿದೆಯಲ್ಲ,
ನಾನಂತೂ ಬಾಯ್ಬಿಟ್ಟು ಯಾರಿಗೂ ಹೇಳಿಲ್ಲ,
ಕತ್ತಲೊಳು ನನ್ನ ಕಣ್ಣ ಮುಂದಿರುವ ಪುಟ್ಟ ಹಣತೆ ನೀನು….
ಉಸಿರಾಡಲು ಹೆದರಿ ಸಾಯುತ್ತಿರುವೆ ನಾನು….
ಯಾಕೇ ಗೊತ್ತಾ…….
ಉಸಿರು ನಿನ್ನ ಅಲುಗಿಸಿ ಹೆದರಿಸ ಬರದಲ್ಲಾ (ನಮ್ಮಿಬರನು…..)
ನನ್ನ ದುಃಖವನ್ನು ಯಾರಿಗೆ, ಏನೆಂದು ಹೇಳಲಿ….
ನಾನ ಪ್ರೀತಿಸದ ನನ್ನ ಪ್ರೀತಿಗೆ ಪ್ರೀತಿಸು ಎಂದು ಹೇಳಲಾ??????
ಇಲ್ಲಾ……… ನನ್ನ ಮನಸ್ಸಿಗೆ ಅವಳನಾ ಮರೇತು ಬಿಡು ಎಂದು ಹೇಳಲಾ??????
ನಿಜ ಹೇಳಿದರೆ ಎರಡೂ ಆಗದ ಮಾತುಗಳೇ ಅಲ್ವಾ?????
ನನ್ನ ದುಃಖವನ್ನು
ಅವಳ ಮೊದಲ ನೋಟದಲೇ ಆಗಿದು ಪ್ರೇಮಾ,
ಆದರೆ ಅದನ ಎಂದಿಗೂ ಹೇಳೋಕೆ ಆಗಲಿಲ್ಲ ಅದುವೇ ನನ್ನ ಕರ್ಮಾ…
ನನ್ನ ಪ್ರೀತಿ ನನಗೆ ಸಿಗುವುದೋ ಇಲ್ವೋ ಅದೇ ನನ್ನ ಮರ್ಮಾ…
ನನ್ನ ದುಃಖವನ್ನು
ಅವಳನ್ನು ನೋಡದೆ ಬರದು ನನಗೆ ನಿದ್ದೆ……
ಅವಳ ಮಾತು ಕೇಳದೆ ತುಂಬದು ನನ್ನ ಹೊಟ್ಟೆ….
ಅವಳಿಲದೆ ಈ ಬದುಕು ನನಗೆ ಬೇಕೆ??????
ನನ್ನ ದುಃಖವನ್ನು
ಅವಳು ಮರೆತರು ಮರೆಯ ಬಹುದು ನನ್ನಾ….
ನಾ ಹೇಗೆ ಮರೆಯಲಿ ಅವಳನ್ನಾ….
ಅವಳೇ ಜೀವಾ, ಅವಳೇ ಭಾವಾ, ಅವಳೇ ನನ್ನ ಪುಟ್ಟಾ…………..